ಪತಿ ಫಿಲಂಸ್ ಲಾಂಛನದಡಿಯಲ್ಲಿ ಶ್ರೀ ಪಾರ್ಥಸಾರಥಿ, ಗೌತಂ ಸೇಠ್ ನಿರ್ಮಿಸುತ್ತಿರುವ ಇನ್ನೂ ಹೆಸರಿಡದ ಪ್ರೊಡಕ್ಷನ್ ನಂ.೧ ಚಿತ್ರದ ಚಿತ್ರೀಕರಣವು ಇದೇ ೧೬ರಂದು ಮೈಸೂರಿನಲ್ಲಿ ಮುಕ್ತಾಯಗೊಂಡಿತು.
ಮೂವತ್ತೆಂಟು ದಿವಸಗಳ ಕಾಲ ನಡೆದ ಚಿತ್ರದ ಚಿತ್ರೀಕರಣವು ಸಂಪೂರ್ಣ ಮೈಸೂರಿನ ಸುತ್ತಮುತ್ತಲೂ ನಡೆಯಿತು. ಚಿತ್ರಕ್ಕೆ ಏಪ್ರಿಲ್ ಮೊದಲ ವಾರದಲ್ಲಿ ಡಬ್ಬಿಂಗ್ ನಡೆಯಲಿದೆ ಎಂದು ನಿರ್ಮಾಪಕ ಶ್ರೀ ಪಾರ್ಥಸಾರಥಿ ತಿಳಿಸಿದ್ದಾರೆ.
ಚಿತ್ರಕ್ಕೆ ಪಾರ್ಥಸಾರಥಿ ಕಥೆ, ರವಿಶಂಕರ್ನಾಗ್ ಸಂಭಾಷಣೆ, ಶಿವಕುಮಾರ್ ಛಾಯಾಗ್ರಹಣ, ಹರಿಬಾಬು ಸಂಗೀತ, ಮಂಜು ಮೋಹನ್ ಸಾಹಿತ್ಯ, ರಾಜು ನೃತ್ಯ, ವಿಶ್ವ ಸಂಕಲನ, ಬಾಬುಖಾನ್ ಕಲೆ, ವೇಣುಗೋಪಾಲ್ ನಿರ್ಮಾಣ ಮೇಲ್ವಿಚಾರಣೆ ಇದ್ದು, ಚಿತ್ರಕಥೆ, ಸಾಹಸ ಮತ್ತು ನಿರ್ದೇಶನ ವಿಕ್ರಂ.
ತಾರಾಗಣದಲ್ಲಿ ಪ್ರೀತಂ, ಅಮೃತ, ಶರತ್ ಲೋಹಿತಾಶ್ವ, ಶೋಭರಾಜ್, ಪವನ್, ತಬಲ ನಾಣಿ, ಸಂಗೀತ, ಸೋನು ಮುಂತಾದವರಿದ್ದಾರೆ.